ಎಲ್ಲಾ ಮಹಿಮೆಗೂ ಘನತೆಗೂ ಯೋಗ್ಯನು ನೀನೇ

ಎಲ್ಲಾ ಮಹಿಮೆಗೂ ಘನತೆಗೂ ಯೋಗ್ಯನು ನೀನೇ
ನಿನ್ನ ಮನ ತುಂಬಿ ಆರಾಧಿಸುವೆ
ಎಲ್ಲಾ ಸ್ತೋತ್ರಕ್ಕೂ ಗೌರವಕ್ಕೂ ಪಾತ್ರನು ನೀನೇ
ನಿನ್ನ ಮೇಲೆತ್ತಿ ಆರಾಧಿಸುವೆ -೨
ಆರಾಧಿಸುವೆನು ನಿನ್ನ ಯೇಸುವೇ
ಆರಾಧಿಸುವೆನು ನಿನ್ನ -೨

೧. ಆ ಘೋರ ಶಿಲುಭೆಯಲ್ಲಿ ನನಗಾಗಿ
ಜಡಿಯಲ್ಪಟ್ಟೆ
ನನಗಾಗಿ ಜಜ್ಜಲ್ಪಟ್ಟು ನಿನ್ ಪ್ರಾಣ ನೀಡಿದೆ
ಎಷ್ಟೊಂದು ಮಮತೆಯನ್ನು ನನ್ನ ಮೇಲೆ ತೋರಿದೆ
ದಿನವೆಲ್ಲಾ ನಿನ್ನಯ ಪ್ರೀತಿಯ ಹೊಗಳುವೇ - ೨
ಆರಾಧಿಸುವೆನು ನಿನ್ನ...

೨. ಯೆಹೋವಾ ಯೀರೆಯಾಗಿ ಅಗತ್ಯವೆಲ್ಲ ತೀರಿಸಿದೆ
ಯೆಹೋವ ನಿಸ್ಸಿಯಾಗಿ ಜಯವನ್ನು ನೀಡಿದೆ -೨
ಆರಾಧಿಸುವೆನು ನಿನ್ನ...

೩. ಯೆಹೋವಾ ಶಮ್ಮಾ ನೀನೇ ಜೊತೆಯಲ್ಲಿ ನಡೆಯುವೆ
ಯೆಹೋವಾ ರಾಫಾ, ನೀನೇ ಆರೋಗ್ಯದಾಯಕನೆ-೨
ಆರಾಧಿಸುವೆನು ನಿನ್ನ...