ಅಪ್ಪಾ ಅಪ್ಪಾ ಯೇಸಪ್ಪಾ
ನೀನೆ ನನ್ನ ಸರ್ವಸ್ವ
ನಾನು ನಿನ್ನನ್ನು ಬಿಟ್ಟು
ಏನೂ ಮಾಡಲಾರೆನು
೧. ನನ್ನ ನಡೆಯಿಂದಾಗಲಿ
ನನ್ನ ನುಡಿಯಿಂದಾಗಲಿ
ನಿನ್ನ ನಾಮವೊಂದೆ
ಮಹಿಮೆ ಹೊಂದಲಿ
ನನ್ನ ಸರ್ವಾಂಗಗಳು
ನಿನ್ನ ಸ್ತುತಿ ಮಾಡಲಿ
೨. ಸರ್ವ ಸೃಷ್ಟಿಗೆ
ನೀನು ಯಜಮಾನನು
ಸರ್ವ ಲೋಕವು ನಿನಗೆ
ಅಡ್ಡ ಬೀಳಲಿ ಸರ್ವ ಜನರು ನಿನ್ನಲ್ಲಿ ಬಂದು ಸೇರಲಿ
೩. ಯೇಸು ನಾನು ನಿಮ್ಮಲ್ಲಿ
ನಿಮ್ಮ ವಾಕ್ಯ ನನ್ನಲ್ಲಿ
ನಮ್ಮ ಪ್ರಾರ್ಥನೆಯಲ್ಲಿ
ನನಗೆ ಜಯ ಸಿಗಲಿ
ನಾನು ನಿಮ್ಮಲ್ಲಿ ಇದ್ದು
ಬಹಳ ಫಲವ ಕೊಡುವೆನು