೧. ಎಲ್ಲಾ ಠಾವಿನೊಳು ಸುಖ
ನನಗಿಯೋ ನಾಥನು
ಇರಲಾಗಿ ಏನು ದುಃಖ?
ತುಂಬಿರೋದು ಶಾಂತಿಯು
ಶರೀರಾತ್ಮಕ್ಕಾಶೀರ್ವಾದ
ಕೊಡುತ್ತಾನೆ ನಿತ್ಯವು
ಕಷ್ಟ ಬಂದು ಮುತ್ತಿದಾಗ
ಪರಿಹಾರ ಮಾಡೋನು
೨. ಎಲ್ಲಾ ಠಾವಿನೊಳು ಯೇಸು
ಕಾಯುತಾನೆ ನಿಶ್ಚಯ
ಮಾರ್ಗಡೊಂಕು ತೋರೇ ಲೇಸು
ಮಾಡುತ್ತಾನೆ ಒಡೆಯ
ಕಷ್ಟದೊಳ್ ನಿರಂತ್ರ ದಯ
ತೋರಿಸುತ ನಡಿಸಿ
ಅಂತ್ಯದೊಳ್ ನಂಗೀಯ್ವರಾಯ
ಶಾAತಿ ತನ್ನ ರಾಜ್ಯದಿ
೩. ಎಲ್ಲಾ ಠಾವಿನೊಳು ಸುಖ
ಕೊಟ್ಟು ಕಾಯ್ವ ಕರ್ತನು
ಶಕ್ತಿ ಕುಂದಲು ಸಹಾಯ
ಪಾಲಿಸೋನು ನನಗು
ಹಸಿದಾಗ ದಿವ್ಯಮನ್ನ
ಬಡಿಸೋನು ನನಗೆ
ದಾಹವಾಗೆ ಬುಗ್ಗೆಯನ್ನು
ತೋರಿಸೋನು ದೀನಗೆ
೪. ದೀರ್ಘ ಕಷ್ಟ, ರೋಗ, ನಷ್ಟ
ನನ್ನ ಕಾಡುತ್ತಿದ್ದರು
ಪರದಲ್ಲಿ ಭಾಗ್ಯಶ್ರೇಷ್ಠ
ಇಟ್ಟಿದ್ದಾನೆ ನನಗು
ಅಮರತ್ವವುಳ್ಳದೇಹ
ಹೊಂದಿ ಸ್ವಂತ ಗೃಹದೊಳ್
ಜಯ ಜಯ ಶ್ರೀಮಸೀಹ
ಎಂದು ಹಾಡ್ವೆ ನಿತ್ಯದೊಳ್