ಎಷ್ಟಿಂಪು ಯೇಸುನಾಮವು

೧. ಎಷ್ಟಿಂಪು ಯೇಸುನಾಮವು
ವಿಶ್ವಾಸಿ ಕಿವಿಗೆ
ಅಭಯವೀಯುವಂಥಾದ್ದು
ಕAಗಾಲ ಭಕ್ತಗೆ

೨. ದಿಕ್ಕಿಲ್ಲದಂತ ಪಾಪಿಗೆ
ಆಶ್ರಯವಾಗುತೆ
ಅರಣ್ಯ ಹಾಯುವಾತಗೆ
ಈ ನಾಮ ಮನ್ನವೆ

೩. ಈ ನಾಮ ಭದ್ರಶೀಲೆಯು
ಗುರಾಣಿ ಆಸರೆ
ಒಬ್ಬೊಬ್ಬ ಕ್ರೆöÊಸ್ತ ದಾಸಗೂ
ಸಮಸ್ತ ಸಭೆಗೆ

೪. ಉದ್ಧಾರಿ, ಮಿತ್ರ ಪಾಲಕ
ಪ್ರವಾದಿ, ಅರಸೆ
ಸ್ವೀಕಾರ ಮಾಡಿ ಗೀತವ
ನನ್ನಲ್ಪ ಗೀತವೆ

೫. ಅಪಾರ ನಿನ್ನ ಪ್ರೀತಿಯ
ನಾನೆಡೆಬಿಡದೆ
ಕೊಂಡಾಡಿ ಶ್ವಾಸ ಹೋಗುವ
ಸಮಯ ಹಾಡುವೆ