ಒಕ್ಕಲಿಗನು ಹೋದನೊಮ್ಮೆ
ತನ್ನ ಭೂಮಿಗೆ
ಅಕ್ಕರದಿ ಹಸನುಮಾಡಿ ಬಿತ್ತುವುದಕ್ಕೆ
೧. ಬಿತ್ತುವಾಗ ಕೆಲವು ಬೀಜ ದಾರಿಮಗ್ಗಲೊಳ್
ಬಿತ್ತು ಹಕ್ಕಿ ಬಂದು ಬೇಗ
ತಿಂದು ಬಿಟ್ಟವು
೨. ಕೆಲವು ಬೀಜ ಬಂಡೆನೆಲದ
ಮೇಲೆ ಬಿದ್ದವು
ಮೊಳೆತು ಬಿಸಿಲು ಬರಲು ಎಲ್ಲ ಬಾಡಿಹೋದವು
೩. ಕೆಲವು ಬೀಜ ಮುಳ್ಳುಗಿಡಗಳಲ್ಲಿ ಬಿದ್ದವು
ಬೆಳೆದು ಮುಳ್ಳು ಅವುಗಳನ್ನು
ಅಡಗಿಸಿಟ್ಟವು
೪. ಕೆಲವು ಬೀಜ ಒಳ್ಳೇಭೂಮಿಯಲ್ಲಿ ಬಿದ್ದವು
ಫಲದ ಕಾಲದಲ್ಲಿ ಬಹಳ
ಫಲವ ಕೊಟ್ಟವು
೫. ಒಳ್ಳೆ ಹೃದಯದಲ್ಲಿ ಬಿದ್ದ
ದೇವವಾಕ್ಯವು
ಒಳ್ಳೆ ಫಲವ ಬಹಳವಾಗಿ ಕೊಡುತಲಿರುವದು