೧. ಒಂದೊರ್ಷದ ಸಂಚಾರ
ಸAದ್ಹೋಗಿ ಬಿಟ್ಟಿತು
ಈರಿಪ್ಪತ್ತಾರು ವಾರ
ನಮ್ಮಾಯು ಕುಂದಿತು
ಕಾಲಿಟ್ಟ ಹೊಸ ವರ್ಷ
ಎಂಥಾದ್ದು ನಮಗೆ?
ತಂದಿತೋ ದುಃಖ? ಹರ್ಷ?
ಕರ್ತಂಗೆ ಗೊತ್ತದೆ
೨. ನಂಗಿದ್ದ ಪ್ರೀಯರಲ್ಲಿ
ಅನೇಕರಿಲ್ಲವು
ಬರೋ ಯುಗಾದಿಯಲ್ಲಿ
ಇನ್ನಾö್ಯರು ಇರ್ವರು?
ಯೇಹೋವನೆನ್ನಾಶ್ರಯ
ಈ ವರೆೆ ಕಾದನು
ಇನ್ನಾತನೇ ಸಹಾಯ
ನನ್ನನ್ನು ಕಾಯ್ವನು
೩. ಭೂಲೋಕಧನÀವೆಲ್ಲ
ಸುಗತಿ ತಾರದು
ಭೂಲೋಕ ವೈದ್ಯರೆಲ್ಲ
ಸುಕ್ಷೇಮ ಕೊಡರು
ಶ್ರೀ ಯೇಸು, ನೋಡಿ ಮಾಯ
ನೀನೆನ್ನ ವೈದ್ಯನು
ನನ್ನಾತ್ಮ ಪ್ರಾಣ ಕಾಯ
ನಿಂಗೊಪ್ಪಿಸಿದೆನು
೪. ಕಾಪಾಡು ದೀನರನ್ನು
ಈ ಹೊಸ ವರ್ಷದಿ
ಸಮಸ್ತ ತಾಪವನ್ನು
ನಮ್ಮಿಂದ ನೀಗಿಸಿ
ನಿನ್ನಯ ಚಿತ್ತ ರೀತಿ
ನಮ್ಮನ್ನು ನಡಿಸು
ವಿಶುದ್ಧಿ, ಭಕ್ತಿ, ಪ್ರೀತಿ
ನಮ್ಮಲ್ಲಿ ಹೆಚ್ಚಿಸು