ಓ ಅದ್ಭುತ ತಾರೆಯೇ
ಶೋಭಿಸುವ ಜ್ಯೋತಿಯೇ
ಮುಂದೆ ನಡಿಸೆಮ್ಮನು
ದಿವ್ಯವಾದ ಬೆಳಕಿಗೆ
೧. ಮೂವರು ಪಂಡಿತರು
ನೋಡಿದರು ತಾರೆಯ
ತಗ್ಗು ದಿಣ್ಣೆ ಬೆಟ್ಟ ಬಯಲು ದಾಟುತ್ತ
ಬಂದರು ಬೆತ್ಲೇಹೇಮಿಗೆ
೨. ದೂರದಿಂದ ಬಂದೆವು
ಕಾಣಿಕೆಯ ತಂದೆವು
ಎAದೆನ್ನುತ ಅವರು ರಾಜಕುಮಾರನಿಗೆ
ಸಾಷ್ಟಾಂಗವ ಬಿದ್ದರು
೩. ಚಿನ್ನ ಧೂಪ, ರಕ್ತಬೋಳ
ಅರ್ಪಿಸುತ್ತೇವೆ ನಿನಗೆ
ನೀನೆಮ್ಮ ರಾಜನು
ನೀನೆಮ್ಮ ದೇವರು
ಎನ್ನುತ ಸ್ತುತಿಸಿದರು