೧. ಓ ದೇವರೆ
ನಿನ್ ಸೃಷ್ಟಿ ನೋಡುವಾಗ
ಆಶ್ಚರ್ಯದಿಂದ ವರ್ಣಿಸುವೆನು
ಸೂರ್ಯ ಚಂದ್ರ ತಾರೆಗಳೆಲ್ಲವನ್ನು
ಭ್ರಮೆಯಿಂದ ನಾ ನೋಡಿ ಹೇಳುವೆ
ಪಲ್ಲವಿ
ಎನ್ನಾತ್ಮವೇ ಸ್ತುತಿಸು ದೇವರ
ಹೌದಾತನೆ ರಕ್ಷಕನು
೨. ಮನೋಹರ ಪರ್ವತ ಶ್ರೇಣಿಗಳು
ಅವೆಷ್ಟೋ ರಮ್ಯ ಹೊಳೆ ಹಳ್ಳವು
ಪರಿಮಳ ಬೀರುವ ಪುಷ್ಪಗಳು
ನಾ ನೋಡಿ ಹರ್ಷದಿಂದ ಹೇಳುವೆ
೩. ಸುರಿಮಳೆ ಗುಡುಗು ಮಿಂಚುಗಳು
ನೀ ನಂಬಿಗಸ್ತನೆAದು ಹೇಳ್ವವು
ಮಳೆಬಿಲ್ಲು ಅದರ ಬಣ್ಣಗಳು
ನಿನ್ ನೀತಿಯನ್ನು ವರ್ಣಿಸುವವು
೪. ಸೌಂದರ್ಯವೇ ನಿನ್ನೆಲ್ಲ ಸೃಷ್ಟಿಗಳು
ಆದಾಗ್ಯೂ ತೃಪ್ತಿ ಹೊಂದಲಾರೆನು
ನಾ ನೋಡುವೆ ಕಲ್ವಾರಿ ಗುಡ್ಡವನ್ನು
ನನ್ನೇಸು ಅಲ್ಲೇ ಮೃತಿ ಹೊಂದಿದ